ಮಿಚ್ಛಾಮಿ ದುಕ್ಕಡಂ- ಇದು ಪುರಾತನ ಪ್ರಾಕೃತ ನುಡಿ. ಇದರ ಶಬ್ದಶಃ ಅನುವಾದ ಅರ್ಥ — "ಮಾಡಿದ ಎಲ್ಲಾ ದುಷ್ಟ ಕೆಲಸಗಳು ಫಲ ನೀಡದಿರಲಿ". ಇದನ್ನು ಜೈನ ಸಮುದಾಯದ ಪ್ರಮುಖ ಉತ್ಸವಗಳಲ್ಲೊಂದಾದ ಎಂಟು ಅಥವಾ ಹತ್ತು ದಿನಗಳ ಪರ್ಯೂಷಣ ಹಬ್ಬದ ಕೊನೆಯ ದಿನ - ಸಂವತ್ಸರಿಯ ಸಂದರ್ಭದಲ್ಲಿ (ಅಥವಾ ದಶಲಕ್ಷಣದ ಮೊದಲ ದಿನ ) ವಿಶೇಷವಾಗಿ ಬಳಸಲಾಗುತ್ತದೆ . ಈ ದಿನ, ಜೈನರು ತಾವು ಮಾಡಿದ ಅಪರಾಧಗಳನ್ನು ಕ್ಷಮಿಸುವಂತೆ ಸುವಂತೆ ಪರಸ್ಪರರಲ್ಲಿ ವಿನಂತಿಮಾಡುತ್ತಾರೆ . ಈ ನುಡಿಗಟ್ಟನ್ನು ದೈನಂದಿನ ಜೀವನದಲ್ಲಿ ತಪ್ಪು ಮಾಡಿದಾಗ ಅಥವಾ ತಪ್ಪು ಮಾಡಿದ್ದನ್ನು ನೆನೆದುಕೊಂಡಾಗ ಸಹ ಬಳಸಲಾಗುತ್ತದೆ. ಅಜಾಗರೂಕತೆಯಿಂದ ವ್ಯಕ್ತಿಯು ಮಾಡುವ ತಪ್ಪುಗಳಿಗಾಗಿ ಮುಂಚಿತವಾಗಿ ಕ್ಷಮೆ ಕೇಳುವಾಗಲೂ ಬಳಸಲಾಗುತ್ತದೆ. ಆ ಸಂದರ್ಭದಲ್ಲಿ ಧಾರ್ಮಿಕ ಪದ್ಧತಿಯಾಗಿ ಕೂಡ ಜೈನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳನ್ನು ಎದಿರುಗೊಂಡಾಗ "ಮಿಚ್ಛಾಮಿ ದುಕ್ಕಡಂ," ಎಂದು ಪರಸ್ಪರ ಹೇಳುವ ಮೂಲಕ ಅವರ ಕ್ಷಮೆ ಕೋರುವರು. ಇದರ ಅರ್ಥ "ನಾನು ತಮ್ಮಲ್ಲಿ ತಿಳಿದೋ ಅಥವಾ ತಿಳಿಯದೆಯೋ ಯಾವುದೇ ರೀತಿಯಲ್ಲಿ, ಕಾಯಾ ವಾಚಾ ಮನಸಾ (ಚಿಂತನೆ, ಪದ ಅಥವಾ ಕೃತಿಗಳ ಮೂಲಕ ) ಅಪರಾಧ ಮಾಡಿದ್ದಲ್ಲಿ ನಾನು ನಿಮ್ಮ ಕ್ಷಮೆ" ಕೋರುತ್ತೇನೆ. ಯಾವುದೇ ಖಾಸಗಿ ಜಗಳ ಅಥವಾ ವಿವಾದವನ್ನು ಸಂವತ್ಸರಿಯ ನಂತರ ಮುಂದುವರೆಸುವುದಿಲ್ಲ, ಮತ್ತು ಸಾಂಪ್ರದಾಯಿಕವಾಗಿ, ಸ್ನೇಹಿತರು ಮತ್ತು ಸಂಬಂಧಿಗಳಿಗೆ ಪತ್ರಗಳನ್ನು ಕಳುಹಿಸಿ ಮತ್ತು ದೂರವಾಣಿ ಕರೆಗಳನ್ನು ಮಾಡಿ ಅವರ ಕ್ಷಮೆ ಕೇಳಲಾಗುತ್ತದೆ. == ಮಿಚ್ಛಾಮಿ ದುಕ್ಕದಂ ಪ್ರಾರ್ಥನೆ == == ವ್ಯುತ್ಪತ್ತಿ == ಈ ನುಡಿಗಟ್ಟು ಐರ್ಯಪಥಿಕಿ ಸೂತ್ರದಲ್ಲಿಯೂ ಸಹ ಕಂಡು ಬರುತ್ತದೆ. ಇದು ಪ್ರಾಕೃತ ಭಾಷೆ ಈ ನುಡಿಗಟ್ಟಿನ ಸಂಸ್ಕೃತ ಛಾಯೆಯು ಮಿಥ್ಯಾ ಮೇ ದುಷ್ಕೃತಾಂ ಎಂದು ಆಗಿದೆ , == ಸಹ ನೋಡಿ == . & == ಉಲ್ಲೇಖಗಳು ==